Madhu Y N

Madhu Y N

ಮಧು ವೈ ಎನ್ ತುಮಕೂರು ಜಿಲ್ಲೆಯವರು. ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ. ಬಿಟ್ಸ್ ಪಿಲಾನಿಯಿಂದ ಸಾಫ್ಟವೇರ್ ಸಿಸ್ಟಮ್ಸ್‌ನಲ್ಲಿ ಮಾಸ್ಟರ್ಸ್ ಡಿಗ್ರಿ. ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ. ಸದ್ಯಕ್ಕೆ ಐಬಿಎಮ್ ಉದ್ಯೋಗಿ. ಬೆಂಗಳೂರಿನಲ್ಲಿ ವಾಸ.

ಇವರ ಹಲವಾರು ಕತೆಗಳು ಕನ್ನಡದ ಪ್ರಮುಖ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. ಚೊಚ್ಚಲ ಕೃತಿ ‘ಕಾರೇಹಣ್ಣು’ 2019ರ ‘ಈ ಹೊತ್ತಿಗೆ ಕಥಾ ಸಂಕಲನ ಪ್ರಶಸ್ತಿ’ ಪಡೆದಿದೆ. ಎರಡನೆಯ ಕಥಾ ಸಂಕಲನ ‘ಫೀಫೋ’ ಹೊಸ ಮಾದರಿಯ ಕತೆಗಳ ಗುಚ್ಛವೆಂದು ಗುರುತಿಸಿಕೊಂಡಿದೆ. ಇವರ ‘ಕನಸೇ ಕಾಡುಮಲ್ಲಿಗೆ’ ಕನ್ನಡದಲ್ಲಿ ವಿರಳಾತಿವಿರಳವಾಗಿರುವ ಯಂಗ್ ಅಡಲ್ಟ್ ಮಾದರಿಯ, ಹಾಸ್ಯ-ಪ್ರಣಯ ಮಿಶ್ರಿತ ಲವಲವಿಕೆಯ ಕಾದಂಬರಿಯೆಂದು ಓದುಗರ ಪ್ರೀತಿಗೆ ಪಾತ್ರವಾಗಿದೆ. ‘ಡಾರ್ಕ್‌ವೆಬ್’ ಕೃತಿ ತಂತ್ರಜ್ಞಾನದ ಸಂಗತಿಗಳನ್ನು ಕಥಾ ಮಾದರಿಯಲ್ಲಿ ಪ್ರಸ್ತುತಪಡಿಸಿರು

If you like author Madhu Y N here is the list of authors you may also like

Buy books on Amazon

Total similar authors (20)