‌ಅನುಷ್ ಎ. ಶೆಟ್ಟಿ | Anush A. Shetty

‌ಅನುಷ್ ಎ. ಶೆಟ್ಟಿ | Anush A. Shetty

ಅನುಷ್ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭಾ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಸೇರಿ ಆರಂಭಿಸಿರುವ 'ನಾವು' ಮತ್ತು 'ರಿದಂ ಅಡ್ಡ' ಬ್ಯಾಂಡ್‌ಗಳ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕೆಲವು ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಅನುಗ್ರಹ ಪ್ರಕಾಶನವನ್ನು ಮುನ್ನಡೆಸುತ್ತಿದ್ದಾರೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳಿಂದ ಪ್ರೇರಿತರಾಗಿ ಸಾಹಿತ್ಯ ಸೃಜಿಸುವೆಡೆಗೆ ಬಂದ ಅನುಷ್‌ರ ಈವರೆಗಿನ ಬರಹದ ಮೂಲವಸ್ತು ಪ್ರಕೃತಿಮೇ ಆಗಿದೆ. ಸಣ್ಣ ವಿಷಯಗಳಲ್ಲೂ ಕೌತುಕ ತೋರುತ್ತ, ಸದಾ ಊರಿಂದ ಊರಿಗೆ ಓಡಾಡುತ್ತ, ಹಾಡುತ್ತ, ಬರೆಯುತ್ತ ಇರುವ ಇವರು ಸದ್ಯ ಮಡದಿ ಡಾ. ಅನ

If you like author ‌ಅನುಷ್ ಎ. ಶೆಟ್ಟಿ | Anush A. Shetty here is the list of authors you may also like

Buy books on Amazon

Total similar authors (26)